Pages

Sunday, November 10, 2013

ಕೇಸ್ ನ೦.18/9

ತಮಿಳಿನಲ್ಲಿ ಸ್ವಲ್ಪ ದಿನಗಳ ಮುಂಚೆ ಒಂದಷ್ಟು ದುರಂತಮಯ ವಿಶಾದಭಾವದ ಕಥೆಯುಳ್ಳ ಚಿತ್ರಗಳು ಬಿಡುಗಡೆಯಾದವು. ಅತೀ ಕಡಿಮೆ ವೆಚ್ಚದಲ್ಲಿ ಕಥೆಯನ್ನು ನಂಬಿಕೊಂಡು ತಯಾರಾದ ಈ ಚಿತ್ರಗಳಲ್ಲಿ ಯಾರೂ ಸ್ಟಾರ್ ಗಳಿರಲಿಲ್ಲ. ಆದರೆ ಅವೆಲ್ಲ ಯಸಸ್ವಿಯಾದದ್ದು ನಿಜ. ಅದಕ್ಕೆ ಕಾರಣ ಕಥೆ ಎಂಬುದು ಮೊದಲ ಕಾರಣವಾದರೆ ಎರಡನೆಯದು ಅದರ ಬಜೆಟ್. ಅಂತಹ ಚಿತ್ರಗಳಲ್ಲಿ ಕೊನೆ ಊಹಿಸಬಹುದಾಗಿತ್ತು. ದುರಂತ. ಹೌದು ಒಂದು ಪ್ರೇಮಕಥೆ, ಕೆಳವರ್ಗ ಅಥವಾ ಕೆಲ ಮಧ್ಯಮ ವರ್ಗದ ಜನ ಜೀವನ, ವಾಸ್ತವದ ಅಂಶಗಳು ಮತ್ತು ಶೋಷಣೆಯಾ ಅಂಶಗಳು ಈ ಚಿತ್ರಗಳಲ್ಲಿ ಮುಖ್ಯವಾದವುಗಳಾಗಿತ್ತು.ಮೈನಾ, ಎನ್ಗೆಯುಂ ಎಪ್ಪೋದಂ, ಚಿತ್ತರಂ ಪೆಸುದಡಿ, ಅಂಗಾಡಿ ತೇರು ಮೊದಲಾದವುಗಳನ್ನು ಈ ಪಟ್ಟಿಯಲ್ಲಿ ತರಬಹುದು.
ಕೇಸ್ ನಮ್. 18/9 ಅದೇ ರೀತಿಯ ಅದೇ ಅರ್ಥದ ಹೆಸರಿನ ತಮಿಳು ಚಿತ್ರದ ಅವತರಣಿಕೆ. ಹಾಗಾಗಿ ಇಲ್ಲಿ ನಿರ್ದೇಶಕರ ಜಾಣ್ಮೆ ಅಷ್ಟಾಗಿ ಗಮನಿಸುವ ಹಾಗಿಲ್ಲ. ಅಲ್ಲಿನ ಕಥೆಯನ್ನು ಇಲ್ಲ್ಲಿಗೆ ಇಲ್ಲಿನ ಸೊಗಡಿಗೆ ಹೇಗೆ ತಂದಿದ್ದಾರೆ ಎಂಬುದೇ ಗಮನಾರ್ಹ ಅಂಶ.
ಮಹೇಶ ರಾವ್ ಆ ಚಿತ್ರದ ಕಥೆ ಚಿತ್ರಕಥೆ ಮತ್ತು ಚಿತ್ರೀಕರಣ ಶೈಲಿ ಎಲ್ಲವನ್ನೂ ಹಾಗೆಯೇ ಭಟ್ಟಿ ಇಳಿಸಿದ್ದಾರೆ. ಹಾಗಾಗಿ ತಮಿಳು ನೋಡಿ ಮೆಚ್ಚಿದ್ದವರಿಗೆ ಅದೇ ಭಾವವನ್ನು ಎಗ್ಗಿಲ್ಲದೆ ಚಿತ್ರ ಕೊಡುವುದರಲ್ಲಿ ಸಂದೇಹವಿಲ್ಲ. ತಮಿಳು ನೋಡಿಲ್ಲದವರಿಗೂ ಚಿತ್ರ ಮನಕಲಕದೇ ಇರದು. ಅದಕ್ಕೆ ಕಾರಣ ಚಿತ್ರದ ಕಥೆ,ಚಿತ್ರಕಥೆ.
ಚಿತ್ರದ ಕಥೆಯನ್ನು ಹೀಗೆ ಒಂದು ಸಾಲಿನಲ್ಲಿ ಹೇಳಬಹುದು. ಒಬ್ಬ ಅಮಾಯಕನ ಬದುಕಿನಲ್ಲಿ ಘಟಿಸುವ ಘೋರ ಘಟನೆಗಳು, ಅದಕ್ಕೆ ಇಂಬು ಕೊಡುವ ನಮ್ಮ ಸಮಾಜ, ಅಸಹಾಯಕವಾಗುವ ನಮ್ಮ ಕಾನೂನು ವ್ಯವಸ್ಥೆ ಮತ್ತು ಮುದುಡಿಹೋಗುವ ಪ್ರೀತಿ ಜೊತೆಗೆ ಹಣ, ಅಂತಸ್ತಿನ ಹಿರಿಮೆಗಳನ್ನ ಒಂದು ಕಥೆಯಲ್ಲಿ ಹಿಡಿದಿಡುವ ಪ್ರಯತ್ನ.
ಒಂದು ಘಟನೆ ನಡೆದಾಗ ಅದಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ಕರೆದು ಅದನ್ನು ವಿಚಾರಣೆ ಮಾಡುವ ಪೋಲಿಸ್ ಅಧಿಕಾರಿಗೆ ಆಟ ಹೇಳುವ ಕಥೆಯ ಮೊದಲರ್ಧದ ಚಿತ್ರ. ಆನಂತರ ಅದೇ ಘಟನೆಗೆ ಸಂಬಂಧಿಸಿದ ಇನ್ನೊಂದು ವ್ಯಕ್ತಿ ಹೇಳುವ ಕಥೆ ಇನ್ನರ್ಧ ಸಿನಿಮಾ. ಇವೆಲ್ಲವನ್ನೂ ಒಗ್ಗೂಡಿಸಿ ಪೋಲಿಸ್ ಅಧಿಕಾರಿ ತಾನು ಮಾಡುವ ಕೆಲಸವೇ ಸಿನೆಮಾದ ಅಂತ್ಯ ಎಂದು ಇಡೀ ಚಿತ್ರವನ್ನು ವಿಂಗಡಿಸಬಹುದು.
ಏನೇ ಆದರೂ ಕಥೆಯಲ್ಲಿ ಸತ್ವವಿದೆ, ನೋವಿದೆ. ದ್ವಿತೀಯಾರ್ಧ ಸ್ವಲ್ಪ ಎಳೆದಂತೆನಿಸಿದರೂ ಕೊನೆ ಕೊನೆಯಲ್ಲಿ ಚಿತ್ರ ವೇಗ ಪಡೆದುಕೊಂಡು ಕುತೂಹಲದ ಗೂಡಾಗುತ್ತದೆ.
ಚಿತ್ರದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರ ವಹಿಸಿದ್ದಾರಾದರೂ ಅವರ ಎಂದಿನ ಶೈಲಿಯ ಮಾತುಗಳನ್ನು ನಾವು ನಿರೀಕ್ಷಿಸುವಂತಿಲ್ಲ. ಹಾಗೆಯೇ ಪಂಚಿಂಗ್ ಎನಿಸುವ ಸಂಭಾಷಣೆ ಚಿತ್ರದಲ್ಲಿಲ್ಲ. ಅಲ್ಲಲ್ಲಿ ಚುರುಕು ಎನಿಸಿದರೂ ಕಥೆಗೆಷ್ಟು ಬೇಕೋ ಅಷ್ಟೇ ಇದೆ. ಎರಡು ಹಾಡುಗಳು ಮತ್ತವುಗಳನ್ನು ಚಿತ್ರೀಕರಿಸಿರುವ ರೀತಿ ಚೆನ್ನಾಗಿದೆ. ನಾಯಕರಾಗಿ ಅಭಿನಯಿಸಿರುವ ನಿರಂಜನ್ ಇನ್ನೂ ಸಂಭಾಷಣೆ ಒಪ್ಪಿಸುವ ರೀತಿಯಲ್ಲಿ ಪಳಗಬೇಕಾದರೂ ಉಳಿದೆಡೆ ತಮ್ಮ ಸಾಮರ್ಥ್ಯ ತೋರಿದ್ದಾರೆ.ಇನುಲಿದಂತೆ ಸಿಂಧು ಲೋಕನಾಥ, ಶ್ವೇತಾ ಪಂಡಿತ್, ಕರಿಸುಬ್ಬು, ಗಿರಿಜಾ ಲೋಕೇಶ್ ಅಭಿ ಮುಂತಾದವರು ಚೆನ್ನಾಗಿ ಅಭಿನಯಿಸಿದ್ದಾರೆ.ಸಭಾ ಕುಮಾರ್ ಛಾಯಾಗ್ರಹಣ, ದೀಪು ರವರ ಸಂಕಲನ ಮೆಚ್ಚಲಾರ್ಹ ಅಂಶಗಳಾಗಿವೆ.
ನೀವು ತಮಿಳು ಚಿತ್ರ ನೋಡಿಲ್ಲವಾದರೆ ಕೇಸ್ ನ೦ 18/9 ನಿಮಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

No comments:

Post a Comment