Pages

Sunday, November 10, 2013

ಭೈರವಿ--

ಖಾಕಿ ಧರಿಸಿದವರ ಕಥೆಗಳು ಎಲ್ಲಾ ಭಾಷೆಗಳಲ್ಲೂ ಸಲ್ಲುವಂತಹದ್ದು. ಕನ್ನಡದ ಮಟ್ಟಿಗೆ ಮಾಲಾಶ್ರೀ ಅಭಿನಯಿಸಿದ್ದಾರೆ ಎಂದರೇ ಅವರ ಪಾತ್ರ ಪೋಲೀಸ್ ಎಂದು ಕಣ್ಮುಚ್ಚಿಕೊಂಡು ಹೇಳ ಬಹುದಿತ್ತು. ಈಗ ಆಯೇಶಾ ಆ ಜಾಗಕ್ಕೆ ಬಂದಿದ್ದಾರೆ.ಜಿಗಿದು ನೆಗೆದು ಹೊಡೇದಾಡುತ್ತಾರೆ. ಮಾತಿಗೆ ಪ್ರತಿಮಾತು, ಏಟಿಗೆ ಎದು ರೇಟು...ಅವರ ಅಭಿನಯದ ಚಿತ್ರಗಳಲ್ಲಿ ಮಾಮೂಲಿ ಅಂಶಗಳು. ಭೈರವಿ ಚಿತ್ರ ಕೂಡ ಆ ಸಿದ್ಧ ಸೂತ್ರದಿಂದ ಹೊರತಾದ ಚಿತ್ರವಲ್ಲ. ಪೋಲೀಸ್ ಅಧಿಕಾರಿಯೊಬ್ಬಳು ಖಳನನ್ನು ಮಟ್ಟಹಾಕಲು ಕಾನೂನು ಕೈಗೆ ತೆಗೆದುಕೊಳ್ಳುವ ಕಥೆ ಚಿತ್ರದ್ದು. ಇನ್ನೂ ವಿವರವಾಗಿ ಹೇಳಬೇಕೆಂದರೆ ಅಪ್ಪಾಜಿಗೌಡ ಒಬ್ಬ ದುಷ್ಟ, ಭ್ರಷ್ಟ ರಾಜಕಾರಣಿ. ಅವನ ಆಟೋಟಗಳಿಗೆ ತಡೆ ಹೇಳುವವರಾರಿಲ್ಲ ಹಾಗಾಗಿಯೆ ಅವನು ಮಾಡಿದ್ದೇ ಕಾನೂನು. ತನ್ನ ದಂಧೆಗಳನ್ನು ಯಾವುದೇ ಎಗ್ಗು ಸಿಗ್ಗಿಲ್ಲದೇ ನಡೆಸುತ್ತಾನೆ. ಅದಕ್ಕೆ ಯಾರಾದರೂ ಅಡ್ಡ ಬಂದರೇ ಅಡ್ಡಡ್ಡ ಮಲಗಿಸುತ್ತಾನೆ. ಆತನ ಹತ್ತಿರ ಖಳರ ಬಲವೂ ಇದೇ, ಧನಬಲವೂ ಇದೆ, ರಾಜಕೀಯದ ಬಲವೂ ಇದೆ. ಅಂತಹ ಭಯಂಕರನನ್ನು ತಡವಿಹಾಕಿಕೊಳ್ಳುವವಳು ನಮ್ಮ ಚಿತ್ರದ ನಾಯಕಿ.ಚಿಕ್ಕದಾದ ನ್ಯಾಯಯುತವಾದ ಜಗಳಕ್ಕೆ ಖಳನದು ತೀವ್ರ ಪ್ರತಿಕ್ರಿಯೆ. ಅಲ್ಲಿಂದ ಶುರು ನೋಡಿ ಇಬ್ಬರ ನಡುವೆ ತಿಕ್ಕಾಟ. ಇಲ್ಲಿಂದ ಮುಂದಕ್ಕೆ ಕಥೆಯೆಂಬುದು ಗೌಣ.ಹೊಡೆದಾಟ, ಬಡಿದಾಟಕ್ಕೆ ಹೆಚ್ಘು ಪ್ರಾಶಸ್ತ್ಯ.
ಚಿತ್ರದ ಕಥೆಯಲ್ಲಿ ಹೊಸತನವನ್ನು ನಿರೀಕ್ಷಿಸುವ ಹಾಗಿಲ್ಲ. ಆದರೆ ಹೊಡೇದಾಟಗಳು ಚೆನ್ನಾಗಿವೆ. ಇಲ್ಲಿ ನಟಿ ಆಯೇಶಾ ಎದ್ದು ಬಿದ್ದು ಹೊಡೇದಾಡಿದ್ದಾರೆ. ಕೈಗೆ ಸಿಕ್ಕ ಖಳತರನ್ನು ಬಗ್ಗು ಬಡಿಯುತ್ತಾರೆ.ಹೆಣ ಬೀಳಿಸುತ್ತಾರೆ.ಖಡಕ್ಕಾದ ಡೈಲಾಗ್ ಹೊಡೇಯುತ್ತಾರೆ. ದ್ವೀತೀಯರ್ಧದಲ್ಲಂತೂ ಬರೀ ಹೊಡೆದಾಟವೇ ಅಥವಾ ಅದಕ್ಕೆ ಇಂಬುಕೊಡುವ ದೃಶ್ಯಗಳೇ ತುಂಬಿಕೊಂಡಿವೆ. ಹಾಗಾಗಿ ಚಿತ್ರದ ಎರಡನೆಯ ಭಾಗ ಯಾವುದೇ ಕುತೂಹಲ ತಿರುವುಗಳನ್ನು ಹೊಂದಿಲ್ಲ. ಎಲ್ಲವೂ ನಿರೀಕ್ಷೆಯಂತೆಯೇ ನಡೆಯುತ್ತದೆ.
ನಿರ್ದೇಶಕ ಹ.ಸೂ. ರಾಜಶೇಖರ್ ತಮ್ಮ ಕರ್ಫ್ಯೂ ಚಿತ್ರದ ಮೂಲಕ ಹೆಸರು ಮಾಡೀದವರು. ಅವರ ತದನಂತರದ ಚಿತ್ರಗಳು ಹೆಸರು ಮಾಡಲಿಲ್ಲ. ಅವುಗಳಲ್ಲಿ ಹೊಸತನವೂ ಇರಲಿಲ್ಲ. ಈ ಚಿತ್ರವನ್ನೂ ಅವರ ಸಾದಾರಣ ಚಿತ್ರಗಳ ಪಟ್ಟಿಗೆ ಸೇರಿಸಬಹುದು.ಆದರೆ ಚಿತ್ರಕಥೆಯಲ್ಲಿ ಒಂದಷ್ಟು ಬೆವರಿಳಿಸಿದ್ದರೇ ಬಹುಶ ಚಿತ್ರದ ಗತಿ ಮತ್ತು ನಿರೂಪಣೆ ಸ್ವಲ್ಪ ಆಸಕ್ತಿದಾಯಕವಾಗಿತ್ತೇನೋ..? ಆದರೆ ಆ ತರಹದ ಯಾವ ಪ್ರಯತ್ನವನ್ನು ರಾಜಶೇಖರ್ ಮಾಡಿಲ್ಲ. ಆಯೇಶಾ ಚಿತ್ರಕ್ಕೆ ಇಷ್ಟು ಸಾಕು, ಹೊಡೇದಾಟಗಳಿದ್ದರೇ ಬಿ.ಸಿ ಕೇಂದ್ರಗಳಿಗೆ ಇಷ್ಟಿದ್ದರೇ ಓಡುತ್ತದೆ ಎಂಬ ಲೆಕ್ಕಾಚಾರದಂತೆ ಚಿತ್ರ ಮಾಡಿರುವುದು ಎದ್ದು ಕಾಣುತ್ತದೆ.ಗೌರಿ ವೆಂಕಟೇಶ್ ಛಾಯಾಗ್ರಹಣಕ್ಕೆ ಸಾದಾರಣ ಎಂದು ಕೈ ತೊಳೆದುಕೊಳ್ಳಬಹುದು. ವೀರ್ ಸಮರ್ಥರ ಸಂಗೀತದಲ್ಲಿ ಒಂದೆರೆಡು ಹಾಡನ್ನು ನೆನಪಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡಬಹುದು.
ಆಯೇಶಾರ ಸಂಪೂರ್ಣ ಗಮನವಿರುವುದು ಸಾಹಸದ ಮೇಲೆ. ಹಾಗಾಗಿಯೇ ಅಭಿನಯದಲ್ಲಿ ಅವರಿಂದ ಸಾದಾರಣಕ್ಕಿಂತ ಹೆಚ್ಚು ನಿರೀಕ್ಷೆ ಮಾಡುವ ಹಾಗಿಲ್ಲ.ತಂದೆಯಾಗಿ ರಮೇಶ್ ಭಟ್, ಖಳನಾಗಿ ಮೈಕೊ ನಾಗರಾಜ್, ಭ್ರಷ್ಟ ಪೋಲೀಸ್ ಅಧಿಕಾರಿಯಾಗಿ ಸುಚೇಂದ್ರಪ್ರಸಾದ್ , ಸತೀಶ್ ನೀನಾಸಮ್ ಉತ್ತಮ ಅಭಿನಯನೀಡಿದ್ದಾರೆ. ನಟ ದಿಲೀಪ್ ರಾಜ್ ರದು ಚಿಕ್ಕದಾದ ಪಾತ್ರ. ಇನ್ನುಳಿದ ಪಾತ್ರಗಳು ನೆನಪಲ್ಲಿ ಉಳಿಯುವುದಿಲ್ಲ.ಸಾಹಸಪ್ರಿಯರು, ಸುಮ್ಮನೆ ಟೈಮ್ ಪಾಸ್ ಮಾಡಬೇಕೆನ್ನುವವರು ಭೈರವಿ ಚಿತ್ರವನ್ನೊಮ್ಮೆ ನೋಡಬಹುದು

No comments:

Post a Comment