Pages

Sunday, November 10, 2013

ಕುಂಭ ರಾಶಿ:


ಅಪ್ಪ ಸ್ಮಶಾನದಲ್ಲಿ ಹೆಣ ಸುಡುವ ಕಾಯಕ ಮಾಡುವವನು. ಹೆಣವೆಂದರೆ ಅವನಿಗೆ ಅನ್ನ. ಮಗ ಸಿದ್ದೇಶ ಚಿಂದಿ ಆಯುವ ಕಾಯಕದಲ್ಲಿ ತೊಡಗಿಕೊಂಡವನು. ತಂದೆ ಮಕ್ಕಳ ನಡುವೆ ಅಪಾರ ಪ್ರೀತಿ ಮಮತೆಯಿದೆ.ಆದರೆ ಅದೊಂದು ದಿನ ಸ್ಮಶಾಣದಲ್ಲಿ ನಡೆಯುವ ಜಗಳದಲ್ಲಿ ಸಿದ್ದ ಪಾಲ್ಗೊಂಡು ಕೊಲೆಯಾದವನು ಭೂಗತಲೋಕದ ಶರತ್ ಭಂಡಾರಿಯ ಶಿಷ್ಯ. ತನ್ನ ಶಿಷ್ಯನನ್ನೇ ಕೊಲೆ ಮಾಡಿದ ಸಿದ್ದನನ್ನು ಜೈಲಿನಿಂದ ಬಿಡಿಸಿ ತನ್ನ ಬಾಲಿ ಇರಿಸಿಕೊಳ್ಳುವ ಮೂಲಕ  ನಾಯಕ ಸಿದ್ದನನ್ನು ಭೂಗತ ಲೋಕಕ್ಕೆ ಎಂಟ್ರಿ ಮಾಡಿಸುತ್ತಾನೆ ಶರತ್.ಇದೆಲ್ಲದರ ನಡುವೆ ರೂಪಿಕ ಸಿದ್ದೆಶನನ್ನು ಪ್ರೀತಿಸುತ್ತಾಳೆ.  ಮುಂದೆ...? ಕನ್ನಡ ಚಿತ್ರಗಳನ್ನು ನೋಡಿ ಅನುಭವವಿರುವ ಯಾರಾದರೂ ಮುಂದಿನ ಕಥೆಯನ್ನು ಊಹಿಸಿಬಿಡಬಹುದು.ಅಪ್ಪನ ವಾತ್ಸಲ್ಯ, ಪ್ರಿಯತಮೆಯ ಪ್ರೀತಿ ಮತ್ತು ಭೂಗತಲೋಕದ ಕಪಿಮುಷ್ಟಿಯ ನಡುವೆ ಸಿಲುಕುವ ನಾಯಕನ ಸ್ಥಿತಿ ಏನು..? ಅವನಿಗೆ ಪ್ರೀತಿ ಸಿಗುತ್ತದಾ..? ಭೂಗತಲೋಕ ರೌಡಿಯೊಬ್ಬನನ್ನು ಸಾಮಾನ್ಯನಂತೆ ಜೀವನ ಸಾಗಿಸಲು ಅನುವು ಮಾಡಿಕೊಡುತ್ತದಾ..? ಎಂಬೆಲ್ಲಾ ಪ್ರಶ್ನೆಗಳಿಗೆ ಸರ್ವೇ ಸಾದರಣವಾದ ಉತ್ತರವನ್ನು ನಿರ್ದೇಶಕರು  ಕೊಡುತ್ತಾರೆ. ಕಥೆಯ ಆಶಯಕ್ಕೆ ತಕ್ಕಂತೆ ಚಿತ್ರಕಥೆ ರಚಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿಯೇ ಚಿತ್ರ ಎಲ್ಲೂ ಪರಿಣಾಮ ಬೀರುವುದಿಲ್ಲ. ಭೂಗತಲೋಕ ಮತ್ತು ಪ್ರೇಮಲೋಕದ ನಡುವೆ ಸಿಕ್ಕು ನರಳುವ ನಾಯಕನ ಮೇಲೆ ನೋಡುಗನಿಗೆ ಯಾವ ಆಪ್ತ ಭಾವನೆಯೂ ಹುಟ್ಟುವುದಿಲ್ಲ. ಹಾಗೆ ಹೊಡೆದಾಟದ ಸನ್ನಿವೇಶಗಳನ್ನು ಬಿಟ್ಟರೆ ಭಾವನಾತ್ಮಕ ದೃಶ್ಯಗಳೂ ಎಲ್ಲೂ ಮನಸಿಗೆ ನಾಟುವುದಿಲ್ಲ. ಇದಕ್ಕೆ ಕಾರಣ ಚಿತ್ರಕಥೆ / ದೃಶ್ಯ ಜೋಡಣೆ ಎನ್ನಬಹುದು. ಎಲ್ಲೆಲ್ಲೋ ಬರುವ ಬಿಡಿಬಿಡಿ ದೃಶ್ಯಗಳು ಮತ್ತೆಲ್ಲೋ ಸಿಗುವ ನಾಯಕಿ, ಹೊಡೆದಾಟ, ಹಾಡುಗಳು ಹೀಗೆ ಇಡೀ ಚಿತ್ರವೇ ಒಂದು ರೀತಿಯ ಅಸಂಕಲಿತ ಕಚ್ಚಾ ವೀಡಿಯೋನಂತೆ ಭಾಸವಾಗುತ್ತದೆ. ಹಾಗೆ ಚಿತ್ರದುದ್ದಕ್ಕೂ ಹೇರಳವಾಗಿ ಮಧ್ಯಪಾನ, ಧೂಮಪಾನದ ದೃಶ್ಯಗಳಿರುವುದರಿಂದ  ಧೂಮಪಾನ ಆರೋಗ್ಯಕ್ಕೆ ಹಾನಿಕರ ಸಂದೇಶ ಸಿನಿಮಾದ ಒಂದು ಭಾಗವೇ ಆಗಿಹೋಗಿದೆ.
ಚಿತ್ರದ ನಾಯಕ ಸಿದ್ದೆಷಣ ಪಾತ್ರದಲ್ಲಿ ಚೇತನ್ ಚಂದ್ರ ಅಭಿನಯಿಸಿದ್ದಾರೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ಅಷ್ಟು ಭಾವತೀವ್ರತೆಯನ್ನು ವ್ಯಕ್ತಪಡಿಸುವಲ್ಲಿ ಸಾದಾರಣ ಎನಿಸುವ   ಚೇತನ್ ಹೊಡೆದಾಟದ ದೃಶ್ಯಗಳಲ್ಲಿ ತಮ್ಮ ಏಯ್ಟ್ ಪ್ಯಾಕ್ ಅಂಗ ಸೌಷ್ಟವವನ್ನು ಧಾರಾಳವಾಗಿ ಪ್ರದರ್ಶನಕ್ಕಿಟ್ಟಿದ್ದಾರೆ. ಹಾಗೆ ರೂಪಿಕ ರಸ್ತೆಯಲ್ಲಿ ಸಿಗುತ್ತಾರೆ, ನಾಯಕನೊಂದಿಗೆ ಹಾದಿ ಕುಣಿಯುತ್ತಾರೆ. ಅಷ್ಟೇ. ಈ ಚಿತ್ರಕ್ಕಾಗಿ ಚೇತನ್ ಚಂದ್ರ ಮೈಬೆವರಿಳಿಸಿ ಕಸರತ್ತು ಮಾಡಿ ದೇಹವನ್ನು ಹುರಿಗೊಳಿಸಿಕೊಂಡಿದ್ದರೆ ನಾಯಕಿ ರೂಪಿಕ ದುಂಡು ದುಂಡಾಗಿ ಗುಂಡಮ್ಮನಂತಿದ್ದಾರೆ. ಅವರಿಗೆ ಚಿತ್ರದಲ್ಲಿ ಅಂತಹ ಕೆಲಸವಿಲ್ಲ. ಇನ್ನು ಶರತ್  ಲೋಹಿತಾಶ್ವ, ಗುರುರಾಜ್ ಹೊಸಕೋಟೆ ಪಾತ್ರ ಬೇಡಿದ್ದನ್ನು ಧಾರಾಳವಾಗಿ ನೀಡಿದ್ದಾರೆ.
ಜೈ ಆನಂದ್ ಛಾಯಾಗ್ರಹಣ, ಶ್ರೀವತ್ಸರ ಸಂಗೀತಕ್ಕೆ ಪಾಸ್ ಮಾರ್ಕ್ಸ್ ಕೊಡಬಹುದು. ಸುಮ್ಮನೆ ಹೊಡೆದಾಟಗಳನ್ನ ನೋಡಿ ಎದ್ದು ಬರೋಣ ಎನ್ನುವವರಿಗೆ  ಈ ಚಿತ್ರ ಮೊಸಮಾಡುವುದಿಲ್ಲ.

No comments:

Post a Comment