Pages

Sunday, November 10, 2013

ಅಲೆಃ

ಧಾರಾವಾಹಿಗಳಲ್ಲಿ ಸಾಮಾನ್ಯವಾಗಿದ್ದ ಪ್ರಧಾನ ನಿರ್ದೇಶಕ ಎಂಬುದು ಅಲೆ ಚಿತ್ರದ ಮೂಲಕ ಹಿರಿತೆರೆಗೂ ಪಾದಾರ್ಪಣೆ ಮಾಡಿರುವುದು ಅಲೆ ಚಿತ್ರದ ವಿಶೇಷ ಎನ್ನಬಹುದು. ಹೌದು. ಚಿತ್ರದ ನಿರ್ದೇಶನ ಆದತ್ ಅವರದ್ದಾದರೇ ಪ್ರಧಾನ ನಿರ್ದೇಶನ ಗೋಪಿಕಿರಣ್ ಅವರದ್ದು. ಇದು ಚಿತ್ರದಲ್ಲಿನ ಕಥೆಗೆ ನಿರೂಪಣೆಗೆ ಯಾವುದೇ ರೀತಿಯ ಸಹಾಯ ಮಾಡಿಲ್ಲ. ಯಾಕೆಂದರೆ ಅಲೆ ಕಥೆಯೇ ಹಳೆಯದ್ದು. ಮತ್ತು ಸಾದಾರಣವಾದದ್ದು. ಹೊಸತನ, ನಾವೀನ್ಯತೆ ತಿರುವು ಮುಂತಾದವುಗಳು ಕಥೆಯಲ್ಲಿಯೇ ಇಲ್ಲ . ಹಾಗಾಗಿ ಚಿತ್ರದ್ದು ಕವಲುಗಳಿಲ್ಲದ ನೇರ ರಸ್ತೆ. ಒಮ್ಮೆ ನಡೆದರೇ ಸುತ್ತಾ ಮುತ್ತಾ ನೋಡದೇ ಸಾಗುತ್ತಲೇ ಇರುತ್ತದೆ.
ನಾಯಕ ಕಿರಣ್ ನ ಸಾಕು ತಂದೆ ಹೋಟೆಲ್ ನಡೆಸುತ್ತಾರೆ. ನಾಯಕಿಯ ಮಾವ ಖಳ. ಮಾತೆತ್ತಿದರೇ ಪಿಸ್ತೋಲ್ ತೆಗೆದು ಗುಂಡು ಹಾರಿಸಿ ಕೊಲೆ ಮಾಡುತ್ತಾನೆ. ಅಸಹಾಯಕ ಪೋಲೀಸ್ ಅಧಿಕಾರಿ ವಾಸು ಹಲ್ಲಕಚ್ಚುತತಾರೆಯೇ ವಿನಹ ಬೇರೇನೂ ಮಾಡುವುದಿಲ್ಲ. ಅಂತಹ ಖಳನ ಸೋದರ ಮಾವನ ಮಗಳೇ ನಾಯಕಿ. ಅವಳಿಗೆ ನಾಯಕ ಡಿಕ್ಕಿ ಹೊಡೆಯುತ್ತಾನೆ, ಆನಂತರವೂ ಆಕಸ್ಮಿಕವಾಗಿ ಸಿಕ್ಕುತ್ತಾನೆ. ಪ್ರೀತಿ ಶುರುವಾಗಿ ಹಾಡೂ ಹಾಡುತ್ತಾನೆ. ಅವಳ ಮನಸ್ಸನ್ನು ಗೆಲ್ಲಲ್ಲಿ ಆತ ಹೆಚ್ಚು ಶ್ರಮ ತೆಗೆದುಕೊಳ್ಳುವುದಿಲ್ಲ. ಆಕೆ ಪಟ್ಟನೇ ಅವನಿಗೆ ಬಿದ್ದು ಬಿಡುತ್ತಾಳೆ. ಅವಳ ಜೊತೆ ಡ್ಯುಯೆಟ್ ಆದ ಮೇಲೇ ಖಳನಾಯಕ ಸುಮ್ಮನೇ ಬಿಡುವುದಿಲ್ಲ.ನಾನು ಆಕೆಯ ಕೊರಳಿಗೆ ತಾಳಿ ಕಟ್ಟುತ್ತೇನೆ ಅನ್ನುತ್ತಾನೆ. ಹಾಗೇನಾದರೂ ಪ್ರಯತ್ನಿಸಿದರೇ ನಾನು ನಿನ್ನ ಕೊರಳಿಗೆ ಉರುಳು ಬಿಗಿಯುತ್ತೇನೆ ಎನ್ನುತ್ತಾನೆ. ಇತ್ತ ನಾಯಕ ಕಿರಣಗೆ ತಂದೆಯ ಬೆಂಬಲವಿದೆ. ಅತ್ತ ಖಳನಿಗೆ ಅಮ್ಮನ ಬೆಂಬಲವಿದೆ. ಮುಂದೆ..?ಅದನ್ನು ತಿಳಿಯಲು ನೀವುಚಿತ್ರಮಂದಿರಕ್ಕೆ ಹೋಗಲೇಬೇಕಾಗುತ್ತದೆ.
ಚಿತ್ರದ ಚಿತ್ರಕಥೆ ಸಾದಾರಣ. ಇಲ್ಲಿಯ ಪ್ರೀತಿಗೆ ಹೆಚ್ಚು ಬೆಲೆಯಿಲ್ಲ. ಎಲ್ಲವೂ ಬೇಗಬೇಗನೇ ಆಗಿಹೋಗುತ್ತದೆ. ಹಾಸ್ಯ ದೃಶ್ಯಗಳು ನಗು ತರಿಸುವಲ್ಲಿ ಸೋಲುತ್ತವೆ. ಚಿತ್ರದ ಪ್ರಾರಂಭದಲ್ಲಿ ನಾಯಕ ಎರಡನೆಯ ನಾಯಕಿಯನ್ನು ನೋಡಿ ಹಲ್ಲು ಗಿಂಜುತ್ತಿರುತ್ತಾನೆ. ಆಮೇಲೆ ಅವರನ್ನು ಖಳರು ಹೊತ್ತುಕೊಂಡೂಹೋಗುವಾಗ ಹಿಂದೆ ಬಿದ್ದು ಕಾಪಾಡುತ್ತಾನೆ. ಆಕೆ ಅವ್ನ ಸಾಹಸಕ್ಕೆ ಮೆಚ್ಚಿ ಮುತ್ತು ಕೊಡಲು ಹೋದಾಗ ನಾನು ಹೊಡೆದಾಡಿದ್ದು ಇದಕ್ಕಲ್ಲಾ ಎಂದು ಒಂದು ಹಾಡು ಹಾಡಿ ಕುಣೀಯುತ್ತಾನೆ. ಚಿತ್ರದಲ್ಲಿ ಈ ತರಹದ ಸುಮಾರು ದೃಶ್ಯಗಳಿವೆ. ಕೆಲವು ತರ್ಕಕ್ಕೆ ಸಿಕ್ಕುವುದೇ ಇಲ್ಲ.
ಇದು ಹೊಸಬರ ಚಿತ್ರವಾದ್ದರಿಂದ ಹೊಸತನಕ್ಕಿಂತಲೂ ಸ್ವಲ್ಪ ಮಟ್ಟಗಿನ ಎಳಸುತನ ಚಿತ್ರದಲ್ಲಿ ಕಂಡುಬರುತ್ತದೆ. ನಾಯಕ ತನುಶ್ ಮೊದಲ ಚಿತ್ರದಲ್ಲಿ ಅಭಿನಯಿಸುವ ಪ್ರಯತ್ನ ಪಟ್ಟಿದ್ದಾರೆ. ಹರ್ಷಿಕಾ ಮುದ್ದಾಗಿದ್ದಾರೆ. ಚಿತ್ರದ ಮುಖ್ಯ ಅಂಶವೆಂದರೇ ಹಾಡುಗಳು ಮತ್ತು ಸಂಗೀತ. ಮನೋಮೂರ್ತಿಯವರ ಸಂಗೀತ ಸಾರಥ್ಯದಲ್ಲಿ ಹಾಡುಗಳು, ಹಿನ್ನೆಲೆ ಸಂಗೀತ ಮುದಕೊಡುತ್ತದೆ. ಹಾಗೆಯೇ ಸಂಭಾಷನೆ ಕೂಡ ಕೆಲವುಕಡೆ ಚುರುಕಾಗಿದೆ. ಇನ್ನುಳಿದ ತಾಂತ್ರಿಕ ಅಂಶಗಳು ಸಾದಾರಣ.
ಒಂದು ಹೊಸಬರ ಚಿತ್ರ ಏನೂ ವಿಶೇಷವಿಲ್ಲದೇ ಸಾದಾರನವಾಗಿ ನಿರೂಪಿತವಾಗಿದೆ ಎಂಬುದು ಚಿತ್ರದ ಬಗೆಗಿನ ಒಂದು ಸಾಲಿನ ವಿಮರ್ಷೆಯೂ ಆಗಬಹುದು.

No comments:

Post a Comment