Pages

Sunday, November 10, 2013

ಟೀನೇಜ್

ಅಪರೂಪದ ಸಾಧನೆಯಿಂದ ದಾಖಲೆ ಹುಟ್ಟು ಹಾಕುವುದು ಕೆಲವರಾದರೇ ತಾವು ಮಾಡಿದ್ದೆಲ್ಲವೂ ದಾಖಲೆ ಎನ್ನುವವರು ಕೆಲವರು. ಆ ನಿಟ್ಟಿನಲ್ಲಿ ಮಾಸ್ಟರ್ ಈಗ ಮಿಸ್ಟರ್ ಕಿಶನ್ ಮತ್ತು ಅವರ ತಂದೆ ಶ್ರೀಕಾಂತ್ ಮೊದಲಿಗರು. ಅತೀ ಚಿಕ್ಕ ವಯಸ್ಸಿನಲ್ಲಿ ಕೇರ್ ಆಫ್ ಪುಟ್ ಪಾತ್ ಎನ್ನುವ ಚಿತ್ರ ನಿರ್ದೇಶಿಸುವ ಮೂಲಕ ಗಮನ ಸೆಳೆದ ಕಿಶನ್ ಈಗ ಹದಿಹರೆಯದ ಹುಡುಗನಾಗಿದ್ದಾರೆ. ಹಾಗಾಗಿಯೇ ಅವರ ಹದಿಹರೆಯಕ್ಕೆ ತಕ್ಕಂತೆ ಅವರ ತಂದೆ ಟೀನೇಜ್ ಚಿತ್ರವನ್ನು ಶ್ರೀಮಂತವಾಗಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲೇನಾದರೂ ದಾಖಲೆಯಿದೆಯಾ ಎಂಬ ಪ್ರಶ್ನೆಯನ್ನು ಅವರ ಮುಂದಿಟ್ಟರೆ ಇದೆಯಲ್ಲ... ನೀರಿನಡಿಯಲ್ಲಿನ ಹಾಡು ಎನ್ನುತ್ತಾರೆ ಇರಲಿ.
ಒಂದು ಚಿತ್ರ ಆಪ್ತವಾಗುವುದು ಕಥೆಯಿಂದ ಎಂಬ ವಾಕ್ಯ ಕ್ಲೀಷೆ ಎನಿಸುತ್ತಾದರೂ ಅನಿವಾರ್ಯವಾಗಿ ಆ ರೀತಿ ಹೇಳಲೆಬೇಕಾಗುತ್ತದೆ. ಶ್ರೀಕಾಂತ್ ಚಿತ್ರವನ್ನು ತುಂಬಾ ಶ್ರೀಮತವಾಗಿ ಮಾಡೀದ್ದಾರೆ. ಅಂದದ ಚಿತ್ರೀಕರಣ ಸ್ಥಳಗಳು, ಚಂದನೆಯ ಹುಡುಗಿಯರು ಎಲ್ಲವೂ ಕಣ್ಣಿಗೆ ತಂಪು ತಂಪು. ಹಾಡಿನ ಚಿತ್ರೀಕರಣವೂ ಸೊಗಸಾಗಿದೆ.
ಒಬ್ಬ ಹದಿಹರೆಯದ ಹುಡುಗ. ಅವನಿಗೆ ವಯೊಸಹಜ ಗೊಂದಲ ತಳಮಳ ಕಳವಳಗಳಿವೆ. ಅದರಲ್ಲೂ ಹುದುಗಿಯರನ್ನು ಕಂಡರೆ ಗೊತ್ತಾಗದ ಭಾವದ ಅನಾವರನವಾಗುತ್ತದೆ. ಅದೆಲ್ಲಾ ಪ್ರೀತಿಯಾ ಆಕರ್ಷಣೆಯಾ ..? ಆ ವಯಸ್ಸಿನಲ್ಲಿ ಅವನಿಗೆ ಗೊತ್ತಾಗುವುದಾದರೂ ಹೇಗೆ..?ಹಾಗಾಗಿ ಅವನು ಸಿಕ್ಕ ಹುಡುಗಿಯರಿಗೆಲ್ಲಾ ಹಾಯ್ ಹೇಳುತ್ತಾನೆ. ಸುತ್ತಾಡಲು ಕರೆದವರ ಜೊತೆ ಹಾಯಾಗಿ ಸುತ್ತಾಡುತ್ತಾನೆ. ಅವರೂ ಎಗ್ಗುಸಿಗ್ಗಿಲ್ಲದೇ ಹಾಡುತ್ತಾರೆ ಕುಣಿಯುತ್ತಾರೆ..ಆಮೇಲೆ ಅದು ಪ್ರೀತಿಯಲ್ಲ ಎಂಬುದು ನಾಯಕನಿಗೆ ಗೊತ್ತಾಗುತ್ತದೆ. ಆನಂತರ ನಾಲ್ಕನೆಯ ಹುಡುಗಿಗೆ ಮನಸೊಲುತ್ತಾನೆ...ಅದೇ ನಿಜವಾದ ಪ್ರೀತಿ ಎನ್ನುತಾರೆ ನಿರ್ದೇಶಕರು. ನಾಯಕ ಹೌದೆನ್ನುತ್ತಾನೆ..ಉಳಿದದ್ದು ನಮಗೆ ನಿಮಗೆ ಬಿಟ್ಟದ್ದು.
ಚಿತ್ರ ಪೇಲವವಾಗುತ್ತ ಹೋಗುವುದು ಜಾಳುಜಾಳಾದ ಚಿತ್ರಕಥೆಯಿಂದಾಗಿ.ಒಂದು ಹದಿಹರೆಯದವರ ಚಿತ್ರ ಎಂದಾಗ ಅಲ್ಲಿ ಲವಲವಿಕೆ ಮೊದಲ ಪಾತ್ರವಹಿಸುತ್ತದೆ. ಆ ವಯಸ್ಸಿನ ತುಂಟಾಟ, ಪರದಾಟಗಳು ಎಲ್ಲರಿಗೂ ಖುಷಿ ಕೊಡುವಂತಹವೆ. ಆದರೆ ಟೀನೇಜ್ ಚಿತ್ರದಲ್ಲಿ ಒಂದಷ್ಟು ಚುರುಕಾದ ಸಂಭಾಷಣೆಗಳಿವೆಯಾದರೂ ಪೋಲಿತನವೂ ಅಲ್ಲಿ ಸೇರಿರುವುದು ಲವಲವಿಕೆಯನ್ನು ತಿಂದು ಹಾಕಿದೆ. ಹಾಗೆಯೇ ದೃಶ್ಯಗಳಲಿ ಹೊಸತನ ಆತ್ಮೀಯತೆ ಇಲ್ಲದಿರುವುದು ಸುಮ್ಮನೆ ಕಥೆಯನ್ನು ಮುಂದುವರೆಸುವುದಕ್ಕೋಸ್ಕರ ರಚಿಸಿದ ದೃಶ್ಯಗಳಂತೆ ಭಾಸವಾಗುತ್ತದೆಯೇ ಹೊರತು ಅವಷ್ಯಕವೆನಿಸುವುದಿಲ್ಲ. ಈವತ್ತಿನ ಹುಡುಗರು ಅವರ ಮನಸ್ಥಿತಿಯನ್ನು ತೋರಿಸುವುದಕ್ಕಿಂತ ಹೆಚ್ಚಾಗಿ ಈವತ್ತಿನ ಸಿರಿವಂತ ಆಧುನಿಕ ಮನೆತನದ ಯುವಕ ಯುವತಿಯರ ಪರಿಸ್ಥಿತಿಯ ಬಗ್ಗೆ ಹೆಚ್ಚು ಗಮನವಹಿಸಲಾಗಿದೆ. ಹಾಗಾಗಿಯೇ ಶ್ರೀಮಂತ ಚಿತ್ರಣದ ನದುವೆಯೂ ಚಿತ್ರ ಸೊರಗಿದಂತೆ ಭಾಸವಾಗುತ್ತದೆ. ಒಂದು ಸರಳ ಸುಂದರ ಕಥೆಯ ಮೂಲಕ ಚಿತ್ರವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಸಾಧ್ಯತೆ ನಿರ್ದೇಶಕರಿಗಿತ್ತು. ಆದರೇ ಚಿತ್ರಿಕೆಗಳಿಗೆ ಹೆಚ್ಚು ಆಸಕ್ತಿ ಕೊಟ್ಟು ಚಂದಗಾನಿಸಿರುವ ಶ್ರೀಕಾಂತ್ ಚಿತ್ರವನ್ನು ಭಾವಾನಾರಹಿತವನ್ನಾಗಿಸಿಬಿಟ್ಟಿದ್ದಾರೆ.
ಕಿಶನ್ ಅಭಿನಯಿಸಿದ್ದಾರಾದರೂ ಯಾಕೋ ಆಪ್ತವಾಗುವುದಿಲ್ಲ. ಹಾಡುಗಳಲ್ಲಿನ ಅವರ ತನ್ಮಯತೆ ಅಭಿನಯದಲ್ಲಿ ಕಂಡುಬರುವುದಿಲ್ಲ. ಮುಖಭಾವ, ಕಣ್ಣಭಾಷೆ ಮುಂತಾದವುಗಳ ಬಗ್ಗೆ ಕಿಶನ್ ಇನ್ನು ಮುಂದಿನ ಚಿತ್ರಗಳಲ್ಲಿ ನಿಗಾವಹಿಸಿದರೇ ಉತ್ತಮ. ಅಪೂರ್ವ, ತನ್ವಿ, ಪ್ರಿಯಾ ಜಯಶ್ರೀ, ರಾಜು ತಾಳಿಕೋಟೆ ಮುಂತಾದವರುಗಳ ಪಾತ್ರಗಳೇ ಪರಿಣಾಮಕಾರಿಯಾಗಿಲ್ಲವಾದ್ದರಿಂದ ಅವರ ಅಭಿನಯ ಅಷ್ಟಕ್ಕೆ ಇದೆ. ಛಾಯಾಗ್ರಹಣ ಸಂಗೀತಕ್ಕೆ ಉತ್ತಮ ಅಂಕ ಕೊಡಬಹುದು

No comments:

Post a Comment